ಮ್ಯಾಲಸ್, ಏಟಿಯನ್ ಲೂಯಿ
1775-1812.  ಫ್ರೆಂಚ್ ಭೌತವಿe್ಞÁನಿ ಮತ್ತು  ಮಿಲಿಟರಿ ಎಂಜಿನಿಯರ್.  ಜನನ ಪ್ಯಾರಿಸಿನಲ್ಲಿ 1775 ಜೂನ್ 23ರಂದು.  ಇವನು ಸಂದೇಹಾಸ್ಪದ ವ್ಯಕ್ತಿಯೆಂದು ಪರಿಗಣಿತಾದ್ದರಿಂದ (1793) ಮೆಜೈರ್ಸಿನ ಮಿಲಿಟರಿ ತಾಂತ್ರಿಕಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ಅವಕಾಶವಾಗಲಿಲ್ಲ.  ಹೀಗಾಗಿ ಈತ ಖಾಸಗಿ ಸೈನಿಕನಾಗಿ ಫ್ರೆಂಚ್ ಸೈನ್ಯ ಪ್ರವೇಶಿಸಿದ.  ಅನಂತರ ಪ್ಯಾರಿಸಿನಲ್ಲಿ ಹೊಸದಾಗಿ ಸ್ಥಾಪಿಸಿದ ಎಕೋಲೆ ತಾಂತ್ರಿಕ ಶಾಲೆಯಲ್ಲಿ ಮೂರು ವರ್ಷ ವ್ಯಾಸಂಗಮಾಡಿದ.  ಆಮೇಲೆ ಸೈನ್ಯದ ಎಂಜಿನಿಯರುಗಳ ದಳದನಾಯಕನಾಗಿ ಸೇರಿ 1797ರ ದಂಡಯಾತ್ರೆಯಲ್ಲಿ ಸ್ಯಾಂಬರ್ ಮತ್ತು ಮ್ಯೂಜಿನ ಸೈನ್ಯದಲ್ಲಿದ್ದ.  ಈಜಿಪ್ಟಿನ ದಂಡಯಾತ್ರೆಯಲ್ಲಿ ಸ್ಯಾಂಬರ್ ಮತ್ತು ಮ್ಯೂಜಿನ ಸೈನ್ಯದಲ್ಲಿದ್ದ.  ಈಜಿಪ್ಟಿನ ದಂಡಯಾತ್ರೆಯಲ್ಲಿ ಭಾಗವಹಿಸಿ (1798) 1801ರ ತನಕ ಪೂರ್ವ ಪ್ರದೇಶದಲ್ಲಿಯೇ ಉಳಿದ.  ಅಲ್ಲಿಂದ ಹಿಂತಿರುಗಿದ ಬಳಿಕ ಕ್ರಮವಾಗಿ ಆ್ಯಟ್‍ವರ್ಪ್, ಸ್ಟ್ರಾಸ್‍ಬರ್ಗ್ ಮತ್ತು ಪ್ಯಾರಿಸುಗಳಲ್ಲಿ ಅಧಿಕಾರಿಯಾಗಿದ್ದ. ಆ್ಯಂಟ್‍ವರ್ಪ್ ಮತ್ತು ಸ್ಟ್ರಾಸ್ ಬರ್ಗಿನಲ್ಲಿ 1804ರಲ್ಲಿ ಕೋಟೆ ನಿರ್ಮಾಣಕಾರ್ಯದ ನಿರ್ದೇಶಕನಾಗಿದ್ದ.  ಉದ್ಯೋಗದ ವಿರಾಮವೇಳೆಯಲ್ಲಿ ವೈe್ಞÁನಿಕ ಸಂಶೋಧನೆಗಳನ್ನು ನಡೆಸುತ್ತಿದ್ದ.  ಬೆಳಕಿನ ಮೇಲೆ ಸಂಶೋಧನೆಗಳನ್ನು ಮಾಡಿ ಧ್ರುವೀಕರಣ ವಿಧ್ಯಮಾನವನ್ನು ಶೋಧಿಸಿದ.  ಇದನ್ನು ಪಾರದರ್ಶಕ ವಸ್ತುಗಳಿಂದ ಪ್ರತಿಫಲಿತವಾದ ಬೆಳಕಿನ ಗುಣಲಕ್ಷಣ ಎಂಬ ಲೇಖನದಲ್ಲಿ ಪ್ರಕಟಿಸಿದ (1809).  ಈ ಸಂಶೋಧನೆ ಡೇವಿಡ್ ಬ್ರ್ಯೂಸ್ಟರ್ ಮತ್ತು ಇತರ ವಿe್ಞÁನಿಗಳಿಗೆ ನೈಸರ್ಗಿಕಸ್ಫಟಿಕಗಳ ದ್ಯುತಿವಿಶ್ಲೇಷಣೆ ನಡೆಸಲು ಪ್ರೇರಣೆ ನೀಡಿತು.  ವ್ಶೆಜ್ಞಾನಿಕ ವಿಷಯಗಳಿಗೆ ಸಂಬಂಧಿಸಿದ ಮ್ಯಾಲಸನ ಪ್ರಬಂಧಗಳಾದೆ ವಿಶ್ಲೇಷಣಾತ್ಮಕ ಪ್ರಭಾವಿe್ಞÁನ ಮತ್ತು ಸ್ಫಟಿಕಗಳಲ್ಲಿ ಬೆಳಕಿನ ದ್ವಿವಕ್ರೀಭವನ ಸಿದ್ಧಾಂತ ಅನುಕ್ರಮವಾಗಿ 1810 ಮತ್ತು 1811 ರಲ್ಲಿ ಪ್ರಕಟವಾದುವು.   1810 ರಲ್ಲಿ ಈತ ವಿe್ಞÁನ ಅಕಡೆಮಿಗೆ ಚುನಾಯಿತನಾದ.  ನಿಧನ 23-2-1812.
(ಸಿ.ಎಚ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ